Online Registration Form
1. ಜನಪದ ಗೀತೆಗಳನ್ನು ಮಾತ್ರ ಹಾಡಬೇಕು
2. ಭಾವ ಭಕ್ತಿ ಚಿತ್ರಗೀತೆಗಳಿಗೆ ಅವಕಾಶವಿಲ್ಲ
3. ಜನಪದ ಭಕ್ತಿ ಪ್ರಧಾನ ಗೀತೆಗಳನ್ನು ಹಾಡಬಹುದು ಉದಾಹರಣೆಗೆ (ಚಲ್ಲಿದರು ಮಲ್ಲಿಗೆಯ)
4. ಯಾವುದೇ ಡಬ್ಬಿಂಗ್ ಗೀತೆಗಳಿಗೆ ಅವಕಾಶವಿಲ್ಲ
5. ಮೂಲ ಜನಪದ ಗೀತೆಗಳಿಗೆ ಒತ್ತು ನೀಡಬೇಕು
6. ಮೂರು ಸುತ್ತುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ
7. ಆಯ್ಕೆಗೆ ಮತ್ತು ಗಾಯನಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ
8. ಜನಪದ, ರಂಗ ಗೀತೆ, ಸುಗ್ಗಿ ಪದ, ಗೀಗಿ ಪದ, ಹಂತಿ ಪದ, ಈ ರೀತಿಯ ಗೀತೆಗಳನ್ನು ಹಾಡಬೇಕು
9. ಜನಪದ ಸಾಹಿತ್ಯವನ್ನು ನೋಡದೆ ಹಾಡಿದರೆ ಒಳಿತು
10. ತೀರ್ಪುಗಾರರ ತೀರ್ಪೆ ಅಂತಿಮ
11. ಆಯ್ಕೆ ಪ್ರಕ್ರಿಯೆಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು
12. ಗಾಯಕ ಮತ್ತು ಗಾಯಕಿಯರಿಗೆ ಯಾವುದೇ ವಿಶೇಷ ಪ್ರಯಾಣ ಭತ್ಯೆ ನೀಡುವುದಿಲ್ಲ
13. ವಿಶ್ವ ಕನ್ನಡ ಜನಪದ ಗಾನಕೋಗಿಲೆ ಆದಂತವರಿಗೆ ನಗದು ಬಹುಮಾನ ನೀಡಲಾಗುವುದು
14. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು
15. ಹಾಡುವ ಗಾಯಕರು ಯಾವುದೇ ರೀತಿಯ ಟ್ರ್ಯಾಕ್ ಬಳಸುವಂತಿಲ್ಲ
16. ಜನಪದವನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯುವುದೇ ಹೊರತು ಯಾವುದೇ ವಾಣಿಜ್ಯ ಉದ್ದೇಶಗಳು ಇದರಲ್ಲಿ ಇರುವುದಿಲ್ಲ
17. ಆಯ್ಕೆಗೆ ಗಾಯಕ ಹಾಗೂ ಗಾಯಕಿಯರಿಗೆ ಮಾತ್ರ ಅವಕಾಶವಿದೆ
18. ಯಾವುದೇ ಶಿಫಾರಸ್ಸು ಅಥವಾ ಒತ್ತಡ ತಂದಲ್ಲಿ ಅಂತಹ ಗಾಯಕರನ್ನು ಆಯ್ಕೆ ಪ್ರಕ್ರಿಯೆಯಿಂದ ಹಿಂಪಡೆಯಲಾಗುವುದು
19. ವಿಶ್ವ ಕನ್ನಡ ಜಾನಪದ ಗಾನಕೋಗಿಲೆ ಆಯ್ಕೆ ನೋಂದಣಿಗೆ ಯಾವುದೇ ಒತ್ತಡವಿಲ್ಲ
20. ಆಯ್ಕೆ ಪ್ರಕ್ರಿಯೆ ಪಾರದರ್ಶಕ ವಾಗಿರುತ್ತದೆ ಇದು ಯಾವುದೇ ಸರ್ಕಾರದ ಅನುದಾನದಲ್ಲಿ ನಡೆಯುವ ಕಾರ್ಯಕ್ರಮವವಲ್ಲ.
21. ಆಯುಷ್ ಟಿವಿಯ ಸಹಕಾರದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದ ಸದುಪಯೋಗವನ್ನು ಗಾಯಕ ಗಾಯಕಿಯರು ಬಳಸಿ ಬಹುಮಾನಗಳಿಸಿಕೊಳ್ಳಬಹುದು
22. ಅಂತಿಮ ಹಂತದ ಗ್ರಾಂಡ್ ಫೈನಲ್ ಹಂತ ಬೆಂಗಳೂರಿನಲ್ಲಿ ವರ್ಣ ರಂಜಿತವಾಗಿ ಮೂಡಿ ಬರಲಿದೆ
23. ಪ್ರತಿ ವಿಭಾಗದ ಆಯ್ಕೆ ಪ್ರಕ್ರಿಯೆ ಆಯುಷ್ ಟಿವಿಯಲ್ಲಿ ಪ್ರಸಾರವಾಗುತ್ತದೆ